Karnataka chief minister Siddaramaiah's punch dialogue in Solar park inauguration at Tirumani, Pavagada taluk, Tumakuru district on Thursday, March 1st.
"ಇಲ್ಲಿ ಸೃಷ್ಟಿ ಆಗಿರುವುದು ಅದ್ಭುತ. ಜಗತ್ತಿನ ಎಂಟನೇ ಅದ್ಭುತ. ನೀವು ಈ ಕಾರಣಕ್ಕೆ ಸದಾ ಡಿ.ಕೆ.ಶಿವಕುಮಾರ್ ರನ್ನು ನೆನಪಿಸಿಕೊಳ್ಳಬೇಕು. ಈ ಸೋಲಾರ್ ಪಾರ್ಕ್ ನಿಂದ ಪಾವಗಡದ ಜನರ ಭಾಗ್ಯದ ಬಾಗಿಲು ತೆರೆದಿದಿದೆ" ಹೀಗೆ ಮಾತನಾಡಿ, ಚಪ್ಪಾಳೆ- ಶಿಳ್ಳೆ ಗಿಟ್ಟಿಸಿದರು ಮುಖ್ಯಮಂತ್ರಿ ಸಿದ್ದರಾಮಯ್ಯ. ಪಾವಗಡ ತಾಲೂಕು ತಿರುಮಣಿಯಲ್ಲಿ ಸೋಲಾರ್ ಪಾರ್ಕ್ ನ ಮೊದಲ ಹಂತದ ಉತ್ಪಾದನೆಯಾದ ಆರು ನೂರು ಮೆಗಾವಾಟ್ ಗೆ ಚಾಲನೆ ನೀಡಿದ ಅವರು, ತಮ್ಮ ಭಾಷಣದ ಉದ್ದಕ್ಕೂ ಪಂಚ್ ಡೈಲಾಗ್ ಗಳ ಮೂಲಕ ಗಮನ ಸೆಳೆದರು. ಈ ಸಂದರ್ಭದಲ್ಲಿ ರಾಜಕೀಯ ಮಾತನಾಡಲ್ಲ ಅಂತ ಹೇಳುತ್ತಲೇ ಅಮಿತ್ ಶಾ, ನರೇಂದ್ರ ಮೋದಿ, ಕುಮಾರಸ್ವಾಮಿ ಅವರಿಗೆ ಕಾಲೆಳೆದರು.